TMAE ಸಂಸ್ಥೆಯ ಉಪ-ಕಾರ್ಯದರ್ಶಿ ( Deputy Secretary ) ಎಂದು ನಿಯುಕ್ತಿಗೊಂಡಿರುವ ಶ್ರೀ ಟಿ.ಎಂ. ವಿಜಯ್ ಕುಮಾರವರನ್ನು ಶ್ರೀಮಠ ಹಾಗೂ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಟಿ.ಎಂ. ಚಂದ್ರಶೇಖರಯ್ಯ, ಕಾಲೇಜಿನ ಪ್ರಾಚಾರ್ಯರುಗಳಾದ ಡಾ. ನಾಗೇಂದ್ರರಾವ್, ಉಮಾಶಂಕರ್, ರಾಜಶೇಖರ್, ರೇಣುಕ ಪ್ರಸಾದ್, ಅರುಣ ಕುಮಾರ್, ದಯಾನಂದ & ನಿರ್ದೇಶಕರಾದ ಗುರುಸಿದ್ಧಯ್ಯ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಹರಪನಹಳ್ಳಿಯ ಜ್ಞಾನಗಂಗೋತ್ರಿ ಆವರಣದಲ್ಲಿ ನಮ್ಮ ಟಿ.ಎಂ.ಎ.ಇ ಸಂಸ್ಥೆಯ ವತಿಯಿಂದ " Sri Chandramouleshwara Swamiji Institute of Nursing Sciences" ಹೆಸರಿನಡಿಯಲ್ಲಿ Bachelor of Nursing ( B.Sc in Nursing ) ಕೋರ್ಸ್ನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.
ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭವನ್ನು ಡಾ.ಎಸ್. ಎನ್. ಮಹೇಶ್ ರವರು ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಟಿ.ಎಂ. ಚಂದ್ರಶೇಖರಯ್ಯ, ಪ್ರಾಚಾರ್ಯರಾದ ಅರುಣ್ ಕುಮಾರ್ ಸೇರಿದಂತೆ ತಾಲೂಕಿನ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಣ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.