T‌MAE ಸಂಸ್ಥೆಯ ಉಪ-ಕಾರ್ಯದರ್ಶಿ ( Deputy Secretary ) ಎಂದು ನಿಯುಕ್ತಿಗೊಂಡಿರುವ ಶ್ರೀ ಟಿ.ಎಂ. ವಿಜಯ್ ಕುಮಾರವರನ್ನು ಶ್ರೀಮಠ ಹಾಗೂ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಟಿ.ಎಂ. ಚಂದ್ರಶೇಖರಯ್ಯ, ಕಾಲೇಜಿನ ಪ್ರಾಚಾರ್ಯರುಗಳಾದ ಡಾ. ನಾಗೇಂದ್ರರಾವ್, ಉಮಾಶಂಕರ್, ರಾಜಶೇಖರ್, ರೇಣುಕ ಪ್ರಸಾದ್, ಅರುಣ ಕುಮಾರ್, ದಯಾನಂದ & ನಿರ್ದೇಶಕರಾದ ಗುರುಸಿದ್ಧಯ್ಯ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಹರಪನಹಳ್ಳಿಯ ಜ್ಞಾನಗಂಗೋತ್ರಿ ಆವರಣದಲ್ಲಿ ನಮ್ಮ ಟಿ.ಎಂ.ಎ.ಇ ಸಂಸ್ಥೆಯ ವತಿಯಿಂದ " Sri Chandramouleshwara Swamiji Institute of Nursing Sciences" ಹೆಸರಿನಡಿಯಲ್ಲಿ Bachelor of Nursing ( B.Sc in Nursing ) ಕೋರ್ಸ್‌ನ್ನು ಪ್ರಾರಂಭಿಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ.


ಶಿಕ್ಷಣ ಕಾಶಿ ಎಂದೇ ಪ್ರಸಿದ್ಧಿ ಪಡೆದ ಹರಪನಹಳ್ಳಿಯ ತೆಗ್ಗಿನಮಠದಲ್ಲಿ ನಡೆದ ಲಿಂ. ಚಂದ್ರಮೌಳೀಶ್ವರ ಸ್ವಾಮೀಜಿಯವರ ಪುಣ್ಯಾರಾಧನೆ ಹಾಗೂ ಪ್ರಸ್ತುತ ಶ್ರೀಗಳ ಪಟ್ಟಾಧಿಕಾರದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಪ್ರಶಸ್ತಿ ಪ್ರದಾನ ಹಾಗೂ ಧರ್ಮ ಸಮಾರಂಭ 16-12-2021.



ಮಾಜಿ ಸಚಿವರಾದ ಸನ್ಮಾನ್ಯ ಶ್ರೀ ಸಂತೋಷ್ ಲಾಡ್, ಮಾಜಿ ವೈದ್ಯಕೀಯ ಶಿಕ್ಷಣ ಸಚಿವರು & ಸಂಡೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ತುಕಾರಾಮ್ ಹಾಗೂ ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷರಾದ ಅಬ್ದುಲ್ ಜಬ್ಬರ್ ರವರನ್ನು ಶ್ರೀಮಠದಿಂದ ಸನ್ಮಾನಿಸಿದ ಸಂದರ್ಭ.


ಶತಮಾನಗಳ ಇತಿಹಾಸ ಹೊಂದಿರುವ ಹಾವೇರಿಯ ನಗರ ದೇವತೆ ಹಾವನೂರಿನ ದ್ಯಾಮವ್ವ ದೇವಿ ಭಕ್ತರ ಪಾಲಿನ ಶಕ್ತಿದೇವತೆ.

ನಂಬಿ ಬಂದ ಭಕ್ತರನ್ನು ಸದಾ ಕಾಯುವ ದೇವತೆಯ ಪವಾಡ ಅಸಂಖ್ಯಾತವಾಗಿದ್ದು, ವರ್ಷಕ್ಕೆ ಒಂದು ದಿನಮಾತ್ರ ದೇವತೆಯ ದರ್ಶನವಿರುತ್ತದೆ. ಇನ್ನುಳಿದ ದಿನಗಳಲ್ಲಿ ಭದ್ರವಾಗಿ ಮುಚ್ಚಿಟ್ಟ ಪೆಟ್ಟಿಗೆಗೆ ಪೂಜೆ ಮಾಡಲಾಗುತ್ತದೆ.


ತಾಲ್ಲೂಕು ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಗಳ ಉದ್ಘಾಟನಾ ಸಮಾರಂಭವನ್ನು ಡಾ.ಎಸ್. ಎನ್. ಮಹೇಶ್ ರವರು ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಟಿ.ಎಂ. ಚಂದ್ರಶೇಖರಯ್ಯ, ಪ್ರಾಚಾರ್ಯರಾದ ಅರುಣ್ ಕುಮಾರ್ ಸೇರಿದಂತೆ ತಾಲೂಕಿನ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಣ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.