ಇನ್ನೇನು ಒಂದು ವಾರ ಕಳೆದರೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಎಲ್ಲೆಡೆ ಕನ್ನಡ ಧ್ವಜ ಹಾರಾಡುತ್ತವೆ. ಕೇವಲ ನವೆಂಬರ್ ಕನ್ನಡಿಗರಾಗದೇ ನಂಬರ್ ಒನ್ ಕನ್ನಡಿಗರಾಗಬೇಕು. ಮಾತೃಭಾಷೆ ತಾಯಿ ಇದ್ದಂತೆ. ಇದರ ಬಗ್ಗೆ ಭಾಷಣ ಮಾಡುವುದಕ್ಕಿಂತ ದಿನನಿತ್ಯ ಬಳಕೆ ಮಾಡುವುದರಿಂದ ಮಾತ್ರ ಕನ್ನಡ ಭಾಷೆ ಉಳಿಯಲು ಮತ್ತು ಬೆಳವಣಿಗೆ ಸಾಧ್ಯ.
ಕನ್ನಡ ಭಾಷೆ ಕುರಿತು ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಬಳಕೆಯಿಂದ ಮಾತ್ರ ಕನ್ನಡ ಭಾಷೆಯ ಉಳಿವು ಎನ್ನುವ ಶೀರ್ಷಿಕೆಯಡಿಯಲ್ಲಿ ಪ್ರಕಟಗೊಂಡ ಲೇಖನ.
ಈ ವಸುಂಧರೆಯನ್ನು ವೀರಪುತ್ರರೇ ಮುನ್ನಡೆಸುತ್ತಾರೆ. ಪಾಕ್ ಆಕ್ರಮಿಸಿಕೊಂಡ ಭಾರತದ ಭೂಭಾಗವನ್ನು ವಿಜಯ ಕಾರ್ಯಾಚರಣೆ ಮೂಲಕ ಶತ್ರುಗಳಿಗೆ ಗುಂಡಿಟ್ಟು, ಭಾರತದ ಗಿರಿಕಂದರಗಳನ್ನು ಅವರ ಕಪಿಮುಷ್ಠಿಯಿಂದ ವಿಮುಕ್ತಿಗೊಳಿಸಿ, ಭಾರತದ ತಿರಂಗಾವನ್ನು ನೆಟ್ಟು ದಿಗ್ವಿಜಯ ಸಾಧಿಸಿದ ಕಾರ್ಗಿಲ್ ಯುದ್ಧಕ್ಕೆ 21 ವರ್ಷದ ಸಂಭ್ರಮ.
ಹೋರಾಟ, ಅರ್ಪಣೆ, ತ್ಯಾಗ, ಬಲಿದಾನದಿಂದ ಆಪರೇಷನ್ ವಿಜಯಕ್ಕೆ ವಿಜಯ ತಂದ ಧೀರ ಯೋಧರಿಗೆ ಅನಂತ ನಮನಗಳು. ನೀವು ಶತಕೋಟಿ ಭಾರತೀಯರ ಹೃನ್ಮನದಲ್ಲಿ ಅವಿಸ್ಮರಣೀಯರಾಗಿದ್ದೀರಿ.
ಮಳೆ ಗಾಳಿ ಚಳಿ ಎನ್ನದೇ ಹಗಲಿರುಳು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟ ವೀರ ಯೋಧರ ಬೆವರಿನ ಫಲವಾಗಿ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ. ತ್ಯಾಗ ಮತ್ತು ಬಲಿದಾನಗಳ ಮೂಲಕ ರಕ್ಷಣೆ ಮಾಡುತ್ತಿರುವ ದೇಶದ ಹೆಮ್ಮೆಯ ವೀರ ಸೇನಾನಿಗಳ ಕುರಿತು ಇಂದಿನ ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟಗೊಂಡ ಲೇಖನ.