ಒಂದು ವೃಕ್ಷ ಮಾನವ ಬಿಟ್ಟ ಕಾರ್ಬನ್ ಡೈ ಆಕ್ಸೈಡನ್ನು 40 ವರ್ಷ ತನ್ನೊಡಲೊಳಗೆ ಹುದುಗಿಸಿಕೊಂಡು ನಿರಂತರ ಅದನ್ನು ಆಮ್ಲಜನಕವನ್ನಾಗಿ ಪರಿವರ್ತಿಸುತ್ತದೆ. ಚರಾಚರಗಳಿಗೆ ಆಶ್ರಯ ನೀಡುವ ಮೂಲಕ ಮಾನವನಾದಿಯಾಗಿ ಸಕಲ ಜೀವರಾಶಿಗಳಿಗೆ ಆಮ್ಲಜನಕ ಕೊಡುತ್ತಿರುವ ವೃಕ್ಷದ ಉಪಕಾರವನ್ನು ಸ್ಮರಿಸಿದರೆ ಅಖಂಡ ಸೃಷ್ಟಿಯು ಜೀವರಾಶಿಗಳಿಗೆ ಅದೆಷ್ಟು ಉಪಯುಕ್ತ ಎಂಬುದು ನಮಗೆ ಸ್ಪಷ್ಟವಾಗುತ್ತದೆ. ಹೀಗಾಗಿ ಪ್ರಕೃತಿಯ ಮನೋಹರವಾದ ಸೊಬಗನ್ನು ರಕ್ಷಿಸಿ, ಉಳಿಸಿ ಪರಿಸರವನ್ನು ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ವಿಶ್ವ ಪರಿಸರ ದಿನಾಚರಣೆಯ ದಿನದಂದು ಅಖಂಡ ಪ್ರಕೃತಿಯನ್ನು ಆರಾಧಿಸುವುದು ಈ ಹರಪುರಾಧೀಶನ ಭಾವತರಂಗ.
ಪ್ರಕೃತಿ ದೇವಿಯ ಸಂಪತ್ತು ಮತ್ತು ಸೊಬಗನ್ನು ಇಮ್ಮಡಿಗೊಳಿಸಲು, ಸಂಕಲ್ಪಿಸಿದ ಸಂಕಲ್ಪದಂತೆ ಐದುಸಾವಿರ ಬೀಜದುಂಡೆ ಹಾಗೂ ಹತ್ತು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು,
ನಿಸರ್ಗಕ್ಕೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸಿದ್ದಾಯಿತು.
ಪ್ರಕೃತಿ ದೇವಿಯು ತನ್ನ ಮಕ್ಕಳನ್ನು ಜೋಪಾನವಾಗಿಟ್ಟುಕೊಳ್ಳುತ್ತಾಳೆ ಎಂಬ ಆಶಾಭಾವನೆಗೆ ಬಿಮ್ಮನೆ ಬಂದ ವರುಣದೇವನೇ ಸಾಕ್ಷಿ.
ಈ ಅಭೂತಪೂರ್ವ ಹಸಿರಕ್ರಾಂತಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ತೆಗ್ಗಿನಮಠ ಸಂಸ್ಥಾನದಿಂದ ತುಂಬು ಹೃದಯದ ಅಭಿನಂದನೆಗಳು.